ಅಭಿಪ್ರಾಯ / ಸಲಹೆಗಳು

ಅರಿವು ಶೈಕ್ಷಣಿಕ ಸಾಲ

 

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಲ್ಲಿ

ಅರಿವು ಶೈಕ್ಷಣಿಕ ಸಾಲ ಯೋಜನೆಯ ಮಾರ್ಗಸೂಚಿಗಳು

 

      ಈ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ., ಕೋರ್ಸ್‌ ಗಳಲ್ಲಿ ಸಿ.ಇ.ಟಿ. ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ. 2ರ ಬಡ್ಡಿ ದರದಲ್ಲಿ ವಾರ್ಷಿಕ ಗರಿಷ್ಠ ರೂ.1,00,000/-ಗಳ ಶೈಕ್ಷಣಿಕ ಸಾಲವನ್ನು ಮಂಜೂರು ಮಾಡುವುದು.

ಕ್ರ ಸಂ

ಅರ್ಹತೆ:

 

1

ಅರ್ಹತೆ:

ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು.

2

ಆದಾಯ ಮಿತಿ:

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿಯೊಳಗಿರಬೇಕು.

3

ವಯೋಮಿತಿ:

ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿನವರಾಗಿರಬೇಕು.

4

ವಿಳಾಸ:

ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಲು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.

5

ಮಹಿಳೆಯರ ಮೀಸಲಾತಿ:

ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶೇ.33ರಷ್ಟು ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

6

ವಿಶೇಷಚೇತನರು ಮೀಸಲಾತಿ(ಅಂಗವಿಕಲರ):

ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶೇ.5ರಷ್ಟು ವಿಶೇಷಚೇತನ(ಅಂಗವಿಕಲ) ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

7

 

ಒಂದು ಕುಟುಂಬದಲ್ಲಿ ಎರಡು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.

8

ಅ. ಫೀ ಸ್ಟ್ರಕ್ಚರ್:

ಕರ್ನಾಟಕ ಪರೀಕ್ಷಾ ಪ್ರಾಧಿಕಾರರಿಂದ ನಿಗದಿಪಡಿಸಿರುವ ಸಿ.ಇ.ಟಿ. ಫೀಯನ್ನು ಮತ್ತು ಪ್ರವೇಶ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ, ಪುಸ್ತಕ, ಲ್ಯಾಪ್‌ಟಾಪ್, ಪರೀಕ್ಷಾ ಶುಲ್ಕ ಇತ್ಯಾದಿ ಫೀಗಳನ್ನು ವಾರ್ಷಿಕ ರೂ.1,00,000/-ಗಳ ಮಿತಿಯೊಳಗೆ ಸಾಲ ನೀಡಲಾಗುವುದು. ಸಿ.ಇ.ಟಿ. ಮುಖಾಂತರ ಆಯ್ಕೆಯಾಗಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ನೀಡಿರುವ ಫೀ ಸ್ಟ್ರಕ್ಚರ್ ಅನ್ವಯ ಸಾಲ ನೀಡಲಾಗುವುದು.

 

ಆ. ಹಾಸ್ಟೆಲ್ ಫೀ:

ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲೇ ಹಾಸ್ಟೆಲ್ ಸೌಲಭ್ಯ ಪಡೆದಿದ್ದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರ ಹಾಗೂ ಜಿಲ್ಲಾ ವ್ಯವಸ್ಥಾಪಕರ ತಪಾಸಣಾ ವರದಿಯ ಮೇರೆಗೆ ಹಾಸ್ಟೆಲ್ ಫೀ ನೀಡಲಾಗುವುದು.

9

ಸಾಲದ ಮರುಪಾವತಿ ಅವಧಿ:

ಈ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 36 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರುಪಾವತಿಸಬೇಕು. ಕೋರ್ಸ್‌ ಮುಗಿದ 4 ತಿಂಗಳ ನಂತರ ಮರುಪಾವತಿ ಪ್ರಾರಂಭವಾಗುವುದು (4 ತಿಂಗಳು ವಿರಾಮ ಅವಧಿ ಇರುತ್ತದೆ).

10

 

ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು, ಮೊಬೈಲ್ ಸಂಖ್ಯೆಯು ಆಧಾರ್‌ಗೆ ಜೋಡಣೆಯಾಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರಬೇಕು.

 

 

 

ಸಲ್ಲಿಸಬೇಕಾದ ದಾಖಲೆಗಳು

ಕ್ರ ಸಂ

ಸಲ್ಲಿಸಬೇಕಾದ ದಾಖಲೆಗಳು

ಕಡತದ ಪ್ರಕಾರ

ಕಡತದ ಗಾತ್ರ

1

ವ್ಯಾಸಂಗ ಪ್ರಮಾಣ ಪತ್ರ

PDF

50KB-500KB

2

ಸಿ ಇ ಟಿ ಪ್ರವೇಶ ಪತ್ರದ ಪ್ರತಿ

PDF

50KB-500KB

3

ವ್ಯಾಸಂಗದ ನಿಗದಿತ ಶುಲ್ಕ ಪ್ರತಿ

PDF

50KB-500KB

4

ಕಳೆದ ವರ್ಷದ ಅಂಕ ಪಟ್ಟಿ

PDF

50KB-500KB

5

ಕಾಲೇಜು ವಿಧ್ಯಾರ್ಥಿ ನಿಲಯ ಪತ್ರ

PDF

50KB-500KB

ಇತ್ತೀಚಿನ ನವೀಕರಣ​ : 21-08-2023 04:08 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080